ಪೋಸ್ಟ್‌ಗಳು

ಬೆಂಗಳೂರು - ಪ್ರವಾಸಿ ಸ್ಥಳಗಳು,

ಬೆಂಗಳೂರು  ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ. ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು.  ಬೆಂಗಳೂರು ಪ್ರವಾಸಿ ಸ್ಥಳಗಳು  ಬೆಂಗಳೂರು ಇತರ ಸ್ಥಳಗಳಿಗೆ ಉತ್ತಮವಾದ ಸಂಪರ್ಕ ಹೊಂದಿರುವದರಿಂದ ಪ್ರವಾಸಿಗರಿಗೆ ಸ್ವರ್ಗವಾಗಿದ್ದು, ಅನೇಕ